
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಕನ್ನಡಿಗ ಕೆ.ಎಲ್. ರಾಹುಲ್ ಅವರ ವೃತ್ತಿಜೀವನದ 100ನೇ ಏಕದಿನ ಪಂದ್ಯವಾಗಿದೆ.
2016ರಲ್ಲಿ ಜಿಂಬಾಬ್ವೆ ವಿರುದ್ಧ ಪಾದಾರ್ಪಣೆ ಮಾಡಿದ ರಾಹುಲ್, 50 ಓವರ್‌ಗಳ ಸ್ವರೂಪದಲ್ಲಿ 49.44 ಸರಾಸರಿಯಲ್ಲಿ 8 ಶತಕಗಳು ಮತ್ತು 20 ಅರ್ಧಶತಕಗಳೊಂದಿಗೆ ಒಟ್ಟು 3,412 ರನ್ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಲು ರಾಹುಲ್ ಕೇವಲ 35 ರನ್‌ಗಳ ದೂರದಲ್ಲಿದ್ದು, ಪ್ರಸ್ತುತ 241 ಪಂದ್ಯಗಳಲ್ಲಿ 9965 ರನ್ ಗಳಿಸಿದ್ದಾರೆ.