
ಕೇರಳದಲ್ಲಿ ಮುಂದುವರಿದಿರುವ ಭಾರಿ ಮುಂಗಾರು ಮಳೆಯಿಂದಾಗಿ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಎರ್ನಾಕುಲಂ ಜಿಲ್ಲೆಯ ಆಲುವಾ ಮಣಪ್ಪುರಂ ಶಿವ ದೇವಾಲಯ ಜಲಾವೃತಗೊಂಡಿದೆ.
ಪ್ರವಾಹದ ನೀರು ದೇವಾಲಯದ ಆವರಣ ಮತ್ತು ಗರ್ಭಗುಡಿಗೆ ನುಗ್ಗಿದ್ದು, ಶಿವಲಿಂಗವು ನೀರಿನಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ತೀರದ ನಿವಾಸಿಗಳು ಮತ್ತು ಭಕ್ತಾದಿಗಳು ನದಿ ತೀರಕ್ಕೆ ತೆರಳದಂತೆ ಮತ್ತು ಹೆಚ್ಚಿನ ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.