
ಟಿ20 ವಿಶ್ವ ಚಾಂಪಿಯನ್ ಭಾರತ ತಂಡವು, ಜಪಾನ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಭೀತಿಯಿಂದ 2 ರನ್ಗಳ ಅಂತರದಲ್ಲಿ ಪಾರಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ 5 ಓವರ್ಗಳಿಗೆ ಮೊಟಕುಗೊಂಡ ಪಂದ್ಯದಲ್ಲಿ ಭಾರತ 32 ರನ್ ಗಳಿಸಿದರೆ, ಜಪಾನ್ 30 ರನ್ ಗಳಿಸಿತು.
ಭಾರತ ಮತ್ತು ಜಪಾನ್ ನಡುವೆ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆ ಅಂಗವಾಗಿ ಈ ಪಂದ್ಯವನ್ನು ಏರ್ಪಡಿಸಲಾಗಿತ್ತು.