
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದ ನಂಗಿ ಟೇಕ್ರಿ ಬಳಿ ನಿಯಂತ್ರಣ ರೇಖೆಯನ್ನು ದಾಟಲು ಯತ್ನಿಸಿದ ನಾಲ್ವರು ಉಗ್ರರು ಗಣಿ ಸ್ಫೋಟದಲ್ಲಿ ಹತರಾಗಿದ್ದಾರೆ.
ಮೃತಪಟ್ಟವರಲ್ಲಿ ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಮೊಹಮ್ಮದ್ ಫೈಜಾನ್ ಹಾಗೂ ವಕಾಸ್, ಇಷ್ಟಿಯಾಕ್ ಮತ್ತು ಆಸಿಮ್ ಗುರುತಿಸಲಾಗಿದೆ.
ಘಟನೆಯ ಬಳಿಕ ಭದ್ರತಾ ಪಡೆಗಳು ಗಡಿ ಭಾಗದಲ್ಲಿ ಎಚ್ಚೆತ್ತುಕೊಂಡು ಹೈ ಅಲರ್ಟ್ ಘೋಷಿಸುವುದರೊಂದಿಗೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.