
ಉದ್ಯಮಿ ಅಂಕುರ್ ವಾರಿಕೂ ಅವರು 40ರ ವಯಸ್ಸು ದಾಟಿದವರಿಗೆ ಹಣಕಾಸು ಸ್ವಾತಂತ್ರ್ಯಕ್ಕಾಗಿ ತೋರ್ಪಡಿಕೆಯ ಖರ್ಚುಗಳನ್ನು ಕಡಿಮೆ ಮಾಡಿ, ನಿಜವಾದ ಸಂಪತ್ತು ಸೃಷ್ಟಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.
ಆದಾಯ ಬಂದ ತಕ್ಷಣ ಸಿಂಹಪಾಲನ್ನು ಹೂಡಿಕೆಗೆ ಮೀಸಲಿಟ್ಟು, ಉಳಿದ ಹಣದಲ್ಲಿ ಮಾತ್ರ ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುವುದು ಉತ್ತಮ ಹಣಕಾಸು ನಿರ್ವಹಣೆಯ ಮೂಲ ಮಂತ್ರ ಎಂದು ಅವರು ತಿಳಿಸಿದ್ದಾರೆ.
ಭೌತಿಕ ವಸ್ತುಗಳಿಗಿಂತ ಆರೋಗ್ಯಕರ ಆಹಾರ, ಹೊಸ ಕೌಶಲ್ಯಗಳ ಕಲಿಕೆ ಮತ್ತು ಕುಟುಂಬದೊಂದಿಗೆ ಕಳೆಯುವ ಅನುಭವಗಳಿಗೆ ಖರ್ಚು ಮಾಡುವುದು ದೀರ್ಘಾವಧಿಯಲ್ಲಿ ಉತ್ತಮ ಹೂಡಿಕೆಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.