
ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಕತ್ತಲಲ್ಲಿ ದೀಪದಂತೆ ಬೆಳಗುವ ಮಳೆಬಿಲ್ಲಿನ ಬಣ್ಣದ ಸಸ್ಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಚೆವೆರಿಯಾ ಮೆಬಿನಾ ಎಂಬ ರಸಭರಿತ ಸಸ್ಯಗಳ ಎಲೆಗಳಿಗೆ ಮೈಕ್ರಾನ್-ಗಾತ್ರದ ಫಾಸ್ಫರ್ ಕಣಗಳನ್ನು ಚುಚ್ಚುವ ಮೂಲಕ ಈ ಹೊಸ ಪ್ರಯೋಗವನ್ನು ನಡೆಸಲಾಗಿದೆ.
ಹಗಲಿನಲ್ಲಿ ಸೂರ್ಯನ ಬೆಳಕು ಅಥವಾ ಎಲ್ಇಡಿ ಬೆಳಕನ್ನು ಹೀರಿಕೊಂಡು ಶೇಖರಿಸಿಕೊಳ್ಳುವ ಈ ಸಸ್ಯಗಳು, ಕತ್ತಲಲ್ಲಿ ಸುಮಾರು ಎರಡು ಗಂಟೆಗಳವರೆಗೆ ಪ್ರಕಾಶಮಾನವಾಗಿ ಬೆಳಗುತ್ತವೆ.