
ತೆಂಗಿನಕಾಯಿ, ಕೊಬ್ಬರಿ, ನಾರು ಮತ್ತು ಕೋಕೋ ಪೀಟ್ನಂತಹ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ರೈತರಿಗೆ ಆದಾಯದ ಹೊಸ ಮೂಲಗಳು ಸಿಕ್ಕಿವೆ.
ಕೊಬ್ಬರಿ ಸುಲಿಯುವ ನುರಿತ ಕಾರ್ಮಿಕರ ಅಭಾವದಿಂದಾಗಿ ಕೂಲಿ ದರ ಗಣನೀಯವಾಗಿ ಏರಿಕೆಯಾಗಿದ್ದು, ಪ್ರತಿ 1,000 ಕಾಯಿಗಳಿಗೆ 650 ರಿಂದ 800 ರೂಪಾಯಿ ಕೂಲಿ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಲು ತೋಟಗಾರಿಕೆ ಇಲಾಖೆಯು ರಿಯಾಯಿತಿ ದರದಲ್ಲಿ ಕೊಬ್ಬರಿ ಸುಲಿಯುವ ಯಂತ್ರಗಳನ್ನು ಪೂರೈಸಬೇಕೆಂದು ರೈತರು ಆಗ್ರಹಿಸಿದ್ದಾರೆ.