
ಟಾಟಾ ಗ್ರೂಪ್ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ತೀವ್ರ ಟ್ವೀಟ್ ವಾರ್ ನಡೆದಿದೆ.
ರಾಹುಲ್ ಗಾಂಧಿ ಅವರು ಪ್ರತಿಯೊಂದು ವಿಚಾರವನ್ನೂ ರಾಜಕೀಯಗೊಳಿಸಿ ಭಾರತೀಯ ಉದ್ಯಮಗಳ ಬಗ್ಗೆ ಅಪನಂಬಿಕೆ ಹರಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ರಾಹುಲ್ ಗಾಂಧಿ ಅವರು, ಅಮಿತ್ ಶಾ ನಿವಾಸದಲ್ಲಿ ಟಾಟಾ ಟ್ರಸ್ಟ್ಸ್ ಆತಿಥ್ಯದ ಬಗ್ಗೆ ಪ್ರಶ್ನಿಸಿ, ಸರ್ಕಾರದ ಆಪ್ತ ಉದ್ಯಮಿಗಳ ಹೊರತಾಗಿ ಇತರೆ ಉದ್ಯಮಗಳು ಸರ್ಕಾರದ ಮೇಲಿರುವ ದ್ವೇಷವನ್ನು ಪ್ರಚೋದಿಸಿದ್ದಾರೆ.