
ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಮೇಲೆ ಡ್ರೋನ್ ದಾಳಿ ನಡೆಸಿದ ಪರಿಣಾಮ ನಗರವು ಸುಮಾರು 15 ಗಂಟೆಗಳ ಕಾಲ ಸ್ತಬ್ಧಗೊಂಡಿತ್ತು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಶುಕ್ರವಾರದ ದಾಳಿಯಲ್ಲಿ 14 ಗೋದಾಮುಗಳು, 16 ಖಾಸಗಿ ಕಟ್ಟಡಗಳು, ಮೂರು ಅಪಾರ್ಟ್‌ಮೆಂಟ್‌ಗಳು, ಪವರ್ ಗ್ರಿಡ್ ಮತ್ತು 16 ವಾಹನಗಳಿಗೆ ಹಾನಿಯಾಗಿದೆ.
ಉಕ್ರೇನ್ ಸೇನೆಯು ಪ್ರತಿಯಾಗಿ ರಷ್ಯಾದ 18 ಪ್ರದೇಶಗಳ ಮೇಲೆ 512 ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದು, ಯಾರೊಸ್ಲಾವ್‌ನಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ.