
9ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್ಗೆ ಭಾರತದಿಂದ ಮರಾಠಿಯ 'ಗೋಂಧಲ್' ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದ್ದು, ರಣ್ವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರವನ್ನು ಹಿಂದಿಕ್ಕಿದೆ.
ಬಾಕ್ಸ್ ಆಫೀಸ್ನಲ್ಲಿ ಸುಮಾರು 3,000 ಕೋಟಿ ರೂಪಾಯಿ ಗಳಿಸಿದ್ದ 'ಧುರಂಧರ್' ಸಿನಿಮಾ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವಲ್ಲಿ ಹಿಂದುಳಿದಿದ್ದರಿಂದ ಆಸ್ಕರ್ ಅರ್ಹತೆಗೆ ಸೂಕ್ತವಾಗಿರಲಿಲ್ಲ ಎಂದು ಜ್ಯೂರಿ ಸದಸ್ಯ ವಿವೇಕ್ ವಾಸ್ವಾನಿ ತಿಳಿಸಿದ್ದಾರೆ.
ಒಟ್ಟು 14 ಜನರಿದ್ದ ಜ್ಯೂರಿ ತಂಡದಲ್ಲಿ 'ಧುರಂಧರ್' ಪರವಾಗಿ ಮತ ಹಾಕಿದ್ದು ಕೇವಲ ನಾಲ್ವರು ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.