
ಗೃಹಬಳಕೆಯ ಎಲ್&zwnjಪಿಜಿ ರೀಫಿಲ್ ಸಿಲಿಂಡರ್‌ಗಳಿಗೆ ರಿಯಾಯಿತಿ ಹಾಗೂ ಸಬ್ಸಿಡಿ ಸೌಲಭ್ಯ ಪಡೆಯಲು ಬಯೋಮೆಟ್ರಿಕ್ ದೃಢೀಕರಣವನ್ನು 2026ರ ಅಕ್ಟೋಬರ್ 1ರಿಂದ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 19ರ ವರೆಗೆ ದೇಶದ ಒಟ್ಟು ಗ್ರಾಹಕರಲ್ಲಿ ಶೇಕಡಾ 89.9ರಷ್ಟು ಅಂದರೆ ಸುಮಾರು 27.43 ಕೋಟಿ ಸಕ್ರಿಯ ಗ್ರಾಹಕರು ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ದೃಢೀಕರಣ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ದರದ ರೀಫಿಲ್ ಬುಕಿಂಗ್ ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು ಎಂದು ತಿಳಿಸಲಾಗಿದೆ.