
ನೀಮ್ ಕರೌಲಿ ಬಾಬಾ ಜೀವನ ಆಧಾರಿತ ‘ಹನುಮಾನ್ ಅಂಶ್’ ಸಿನಿಮಾ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಜಾಗತಿಕವಾಗಿ ಬರೋಬ್ಬರಿ 268 ಕೋಟಿ ರೂಪಾಯಿ ಗಳಿಸಿದೆ.
ಚಿತ್ರದ ಈ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಚಿತ್ರವಾಗಿ ಸಂತ ಗೋಸ್ವಾಮಿ ತುಳಸಿದಾಸರ ಜೀವನ ಆಧಾರಿತ ‘ರಾಮ್ಬೋಲ’ ಸಿನಿಮಾವನ್ನು ಘೋಷಿಸಿದ್ದಾರೆ.
ಭಾರತದಲ್ಲೇ ‘ಹನುಮಾನ್ ಅಂಶ್’ ಸಿನಿಮಾ 214.63 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.