
2030ರ ವೇಳೆಗೆ ಭಾರತದ ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಮಾರುಕಟ್ಟೆ ಗಾತ್ರ ₹20 ಲಕ್ಷ ಕೋಟಿಗೆ ತಲುಪಲಿದ್ದು, 5 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ದೇಶದಲ್ಲಿ ಪ್ರಸ್ತುತ 57 ಲಕ್ಷ ಇ.ವಿ ವಾಹನಗಳು ನೋಂದಣಿಯಾಗಿದ್ದು, ಇದು ಒಟ್ಟು ವಾಹನಗಳ ಸಂಖ್ಯೆಯ ಶೇ 7ರಷ್ಟಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಎಕ್ಸ್‌ಪ್ರೆಸ್ ವೇ ಮತ್ತು ಆರ್ಥಿಕ ಕಾರಿಡಾರ್‌ಗಳ ನಿರ್ಮಾಣದಿಂದಾಗಿ ದೇಶದ ಸಾಗಣೆ ವೆಚ್ಚವು ಶೇ 16ರಿಂದ ಶೇ 10ಕ್ಕೆ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.