
ಕನ್ನಡಿಗ ಪತ್ರಕರ್ತರ ಸಂಘ ಮತ್ತು ಕೆಯುಡಬ್ಲ್ಯೂಜೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರಿಗೆ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಧ್ಯಮವು ಉದ್ಯಮವಾಗಿ ಬದಲಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟ ಮೋಹನ್, ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಕಾವಲುಗಾರನಾಗಿರಬೇಕು ಎಂದು ಕರೆ ನೀಡಿದರು.
ಮುಂಬೈನಲ್ಲಿ ಕನ್ನಡ ಪತ್ರಕರ್ತರ ಸಂಘಟನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ ರೋನ್ಸ್ ಬಂಟ್ವಾಳ, ಶಿವು ಮೂಡಿಗೆರೆ ಸೇರಿದಂತೆ ಹಲವರ ಸೇವೆಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘಿಸಿದರು.