
ಹಾಸ್ಯ ನಟ ಚಿಕ್ಕಣ್ಣ ಅವರು ಪಾವನ ಎಂಬುವರೊಂದಿಗೆ ವಿವಾಹವಾಗುತ್ತಿದ್ದು, ಆಗಸ್ಟ್ 29ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.
ಈ ಅದ್ಧೂರಿ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ತಂತ್ರಜ್ಞರು ಮತ್ತು ಚಿಕ್ಕಣ್ಣ ಅವರ ಕುಟುಂಬದವರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
ಚಿಕ್ಕಣ್ಣ ಅವರು ವಿಶೇಷ ಸೂಟ್ ಧರಿಸಿ ಆರತಕ್ಷತೆಯ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.