
‘ಪ್ರೇಮದ ಊರಲಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿರುವ ನಿರ್ದೇಶಕ ಮನೋಜ್ ಕುಮಾರ್, ಸುದ್ದಿಗೋಷ್ಠಿಯಲ್ಲಿ ಹಿರಿಯ ನಟ ರಂಗಾಯಣ ರಘು ಕಾಲಿಗೆ ಬಿದ್ದು ಧನ್ಯವಾದ ತಿಳಿಸಿದರು.
ತಮಗೆ ಸಿಕ್ಕಿರುವ ಈ ಯಶಸ್ಸಿಗೆ ತಮ್ಮ ಗುರುಗಳಾದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರೇ ಕಾರಣ ಎಂದು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ.
ತಮ್ಮ ಗುರುಗಳೊಂದಿಗೆ 6 ವರ್ಷಗಳ ಕಾಲ ಕೆಲಸ ಮಾಡಿದ್ದು, ಅವರು ಕಲಿಸಿಕೊಟ್ಟ ಕಠಿಣ ಪರಿಶ್ರಮವೇ ಚಿತ್ರದ ಉತ್ತಮ ಭಾವನಾತ್ಮಕ ದೃಶ್ಯಗಳಿಗೆ ಕಾರಣ ಎಂದು ಮನೋಜ್ ತಿಳಿಸಿದ್ದಾರೆ.