
ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಬಾಕಿ ಇರುವಾಗ ದೆಹಲಿ ಹೈಕೋರ್ಟ್, ಕೆಂಪುಕೋಟೆ ಮತ್ತು ಐಜಿಐ ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಮಧ್ಯಾಹ್ನ 2:11ಕ್ಕೆ ದೆಹಲಿ ಹೈಕೋರ್ಟ್ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದ್ದು, ದೆಹಲಿಯನ್ನು ಖಾಲಿಸ್ತಾನ್ ಭಾಗವನ್ನಾಗಿ ಮಾಡುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಭದ್ರತಾ ಸಂಸ್ಥೆಗಳು ತೀವ್ರ ತಪಾಸಣೆ ನಡೆಸಿದ್ದು, ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ; ನಗರದಲ್ಲಿ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳನ್ನು ಪ್ರದರ್ಶಿಸಿ ಭದ್ರತೆ ಹೆಚ್ಚಿಸಲಾಗಿದೆ.