
ಮಹಾದೇವ್ ಆನ್ಲೈನ್ ಬುಕ್ ಆ್ಯಪ್ನ ಮುಖ್ಯ ರೂವಾರಿ ಸೌರಭ್ ಚಂದ್ರಾಕರ್ನನ್ನು ಒಮನ್ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಕೇಂದ್ರ ತನಿಖಾ ಸಂಸ್ಥೆಯ ವಿಶೇಷ ತಂಡವು ಮುಸ್ಕತ್ಗೆ ತೆರಳಿ ಕರೆತಂದಿದೆ.
ಇಂಟರ್ಪೋಲ್ ಜಾರಿಗೊಳಿಸಿದ್ದ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ರಾಯಲ್ ಒಮನ್ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.
ವೈದ್ಯಕೀಯ ತಪಾಸಣೆಯ ನಂತರ ಸೋಮವಾರ ರಾಯ್ಪುರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗುವುದು.