
ಬೆಂಗಳೂರಿನಲ್ಲಿ ಅಕಾಲಿಕ ಮಳೆ ಮತ್ತು ಬಿಸಿಲಿನ ಹವಾಮಾನ ವೈಪರೀತ್ಯದಿಂದಾಗಿ ವೈರಲ್ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ದಂಡು ಹರಿದುಬರುತ್ತಿದೆ.
ಕಳೆದ ಒಂದು ವಾರದಲ್ಲಿ ವಾಂತಿ-ಭೇದಿ 3,297, ಇನ್ಫ್ಲುಯೆನ್ಜಾ 274, ಡೆಂಗ್ಯೂ 242 ಹಾಗೂ ಇಲಿ ಜ್ವರದ 94 ಪ್ರಕರಣಗಳು ವರದಿಯಾಗಿವೆ.
ಕುಡಿಯುವ ನೀರನ್ನು ಕಾಯಿಸಿ ಆರಿಸಿ ಬಳಸುವಂತೆ ಮತ್ತು ರೋಗ ಲಕ್ಷಣಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸೂಚಿಸಿದೆ.