
ಯುಪಿಐ ವಹಿವಾಟಿನ ಮೇಲೆ ಪ್ರಸ್ತಾಪಿಸಲಾಗಿದ್ದ ಎಂಡಿಆರ್ ಶುಲ್ಕವನ್ನು ವಿರೋಧಿಸಿ ಅಕ್ಟೋಬರ್ 2ರಂದು ಕರೆ ನೀಡಿದ್ದ ನೋ ಯುಪಿಐ ಡೇ ಪ್ರತಿಭಟನೆಯನ್ನು ವ್ಯಾಪಾರಿಗಳ ಸಂಘಟನೆಗಳು ವಾಪಸ್ ಪಡೆದಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಂಸದ ಪ್ರವೀಣ್ ಖಂಡೇಲ್& zwnj ವಾಲ್& zwnj ನೇತೃತ್ವದ ನಿಯೋಗ ನಡೆಸಿದ ಸಭೆ ಯಶಸ್ವಿಯಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿಭಟನೆ ವಾಪಸ್ ಪಡೆದಿರುವುದರಿಂದ ಹಬ್ಬಗಳ ಸಂದರ್ಭದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಖಚಿತವಾಗಿದೆ.