
ಗ್ರಾಹಕರ ಅನುಮತಿಯಿಲ್ಲದೆ ಖಾತೆಯಿಂದ ಹಣ ಕಡಿತಗೊಳಿಸಿ ಸೇವಾ ನ್ಯೂನತೆ ಎಸಗಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ.
ಶಿವಮೊಗ್ಗದ ಜೂಲಿ ಎಸ್.ಪಿ. ಅವರ ಉಳಿತಾಯ ಖಾತೆಯಿಂದ 2024ರ ಮೇ 3ರಂದು ಮೂರು ಬಾರಿ ವ್ಯವಹಾರ ನಡೆದು ಒಟ್ಟು 7,00,000 ರೂ. ಕಡಿತವಾಗಿತ್ತು.
ಆಯೋಗವು ಬ್ಯಾಂಕ್‌ನಿಂದ ಗ್ರಾಹಕರಿಗೆ ಬರಬೇಕಾದ ಬಾಕಿ ಮೊತ್ತ ರೂ.4,66,667 ಗಳನ್ನು 2024ರ ಅಕ್ಟೋಬರ್ 25 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗೆ ಪಾವತಿಸಲು ಆದೇಶಿಸಿದೆ.