Economy
2027ರ ಡಿಸೆಂಬರ್‌ಗೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಪೂರ್ಣ

2027ರ ಡಿಸೆಂಬರ್‌ಗೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಪೂರ್ಣ

tv9kannada2h
THE BRIEF
1

ಮಧ್ಯ ಕರ್ನಾಟಕದ ಜನತೆಯ ದೀರ್ಘಕಾಲದ ಕನಸಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಭರದಿಂದ ಸಾಗಿದ್ದು, 2027ರ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

2

ದಾವಣಗೆರೆಯ ತೋಳಹುಣಸೆಯಿಂದ ಆನಗೋಡುವಿನವರೆಗೆ ಮೋಟಾರ್ ಟ್ರ್ಯಾಲಿಯಲ್ಲಿ ಸಂಚರಿಸಿ ಸಚಿವರು ಕಾಮಗಾರಿಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.

3

ಈ ಹೊಸ ಮಾರ್ಗದಿಂದ ದಾವಣಗೆರೆಯಿಂದ ಬೆಂಗಳೂರಿಗೆ ಕೇವಲ ಎರಡೂವರೆ ಗಂಟೆಗಳಲ್ಲಿ ತಲುಪಲು ಸಾಧ್ಯವಾಗಲಿದ್ದು, ಪ್ರಯಾಣಿಕರ ಸಮಯ ಮತ್ತು ಹಣ ಉಳಿತಾಯವಾಗಲಿದೆ.