
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯ ಮಾಲೀಕರ ಪಾತ್ರದಲ್ಲಿರುವ ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಕೆಲಸದ ಶೈಲಿಯನ್ನು ಮುಖ್ಯ ತರಬೇತುದಾರ ವಿಕ್ರಮ್ ರಾಥೋರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಂಡವು ಆರಂಭಿಕ ಐದು ಪಂದ್ಯಗಳಲ್ಲಿ ಸೋತರೂ ದ್ರಾವಿಡ್ ಅವರು ತಂಡಕ್ಕೆ ಹಾಗೂ ಸಿಬ್ಬಂದಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ ಎಂದು ರಾಥೋರ್ ತಿಳಿಸಿದ್ದಾರೆ.
ದ್ರಾವಿಡ್ ಅವರು ಕೋಚಿಂಗ್ ಅಥವಾ ಆಟದ ವಿಷಯಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.