
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು 72 ರನ್ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ದಾಖಲೆಯ ಎಂಟನೇ ಬಾರಿಗೆ ಮಹಿಳೆಯರ ಏಷ್ಯಾಕಪ್ ಕಿರೀಟವನ್ನು ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶಫಾಲಿ ವರ್ಮಾ (68) ಮತ್ತು ಸ್ಮೃತಿ ಮಂದಾನ (59) ಅವರ ದಾಖಲೆಯ 129 ರನ್ಗಳ ಜೊತೆಯಾಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 183 ರನ್ಗಳ ಮೊತ್ತ ಕಲೆಹಾಕಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ದೀಪ್ತಿ ಶರ್ಮಾ (19ಕ್ಕೆ3) ಹಾಗೂ ಶ್ರೀಚರಣಿ (20ಕ್ಕೆ4) ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ 20 ಓವರ್ಗಳಲ್ಲಿ 111 ರನ್ಗಳಿಗೆ ಸರ್ವಪತನವಾಯಿತು.