
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿರುವ ಹೆಚ್ಪಿ ಪೆಟ್ರೋಲ್ ಬಂಕ್ಗೆ ಚಾಲಕನೊಬ್ಬ ಜಾಗ್ವಾರ್ ಕಾರನ್ನು ನೇರವಾಗಿ ನುಗ್ಗಿಸಿದ್ದು, ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಕುಡಿದ ಮತ್ತಿನಲ್ಲಿದ್ದನೆಂದು ಶಂಕಿಸಲಾದ ಸಂಜಯ್ ಎಂಬಾತ ಯುವತಿಯೊಂದಿಗೆ ಕಾರಿನಲ್ಲಿ ಬಂದು ಮೊದಲು ಸಿಬ್ಬಂದಿ ಗುಡ್ಡು ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರೂ ಹೊರಟು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.