
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಶಿವಾನಂದ ತಗಡೂರು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಅಭಿನಂದಿಸಿದೆ.
ಬೆಂಗಳೂರಿನ ಕಂದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿವಾನಂದ ತಗಡೂರು ಅವರ ರಂಗಭೂಮಿ ಮತ್ತು ಪತ್ರಿಕೋದ್ಯಮದ ಸಾಧನೆಯನ್ನು ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಸ್ಮರಿಸಿದರು.
ರೈತ ಚಳವಳಿ ಸೇರಿದಂತೆ ಹಲವು ಜನಾಂದೋಲನಗಳಲ್ಲಿ ಸಕ್ರಿಯರಾಗಿದ್ದ ತಗಡೂರು ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಸಂಘದ ಘನತೆಯನ್ನು ಹೆಚ್ಚಿಸಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.