
ಉತ್ತರ ಪ್ರದೇಶದ ಮಥುರಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ರಾಸಾಯನಿಕ ಬಳಸಿ ತಯಾರಿಸಿದ್ದ 500 ಕೆಜಿ ನಕಲಿ ಪನೀರ್ ಮತ್ತು 2,000 ಲೀಟರ್ ಕೃತಕ ಹಾಲನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
ಪನೀರ್ ತಯಾರಿಕೆಗೆ ಬಟ್ಟೆ ಬಿಳುಪುಗೊಳಿಸುವ 'ಟಿನೋಪೋಲ್' ರಾಸಾಯನಿಕ, ಸೋಯಾಬೀನ್ ಎಣ್ಣೆ ಮತ್ತು ಇರಾ ಸೋಡಿಯಂ ಹೈಡ್ರೋಜನ್ ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೃತಕ ಪನೀರ್ ಸೇವನೆಯಿಂದ ಯಕೃತ್ತಿನ ಸಮಸ್ಯೆ ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಅಪಾಯವಿದ್ದು, ಅಂತಾರಾಜ್ಯ ದಂಧೆಯ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.