
ದಕ್ಷಿಣ ಕರಾವಳಿ ರೈಲ್ವೆಯು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಚಲಿಪಟ್ಟಣಂ-ಶಿವಮೊಗ್ಗ ಮತ್ತು ಶಿವಮೊಗ್ಗ-ಗುಂತಕಲ್ ನಡುವೆ ವಿಶೇಷ ರೈಲುಗಳನ್ನು ಆಗಸ್ಟ್ 30ರಿಂದ ಕಾರ್ಯಾಚರಣೆಗೊಳಿಸುತ್ತಿದೆ.
ಮಚಲಿಪಟ್ಟಣಂ-ಶಿವಮೊಗ್ಗ ರೈಲು ಆಗಸ್ಟ್ 30ರಂದು ಹೊರಟು ಆಗಸ್ಟ್ 31ರಂದು ಶಿವಮೊಗ್ಗ ತಲುಪಲಿದ್ದು, ಶಿವಮೊಗ್ಗ-ಗುಂತಕಲ್ ರೈಲು ಆಗಸ್ಟ್ 31ರಂದು ಸಂಜೆ 5:40ಕ್ಕೆ ಶಿವಮೊಗ್ಗದಿಂದ ಹೊರಡಲಿದೆ.
ಈ ವಿಶೇಷ ರೈಲುಗಳು ಒಟ್ಟು 20 ಬೋಗಿಗಳನ್ನು ಹೊಂದಿದ್ದು, ತುಮಕೂರು, ಅರಸೀಕೆರೆ, ಭದ್ರಾವತಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.