
ಸರ್ಕಾರಿ ಶಾಲೆಗಳಲ್ಲಿ ಬೋಧನಾ ಸಿಬ್ಬಂದಿ ಕೊರತೆಯಿಂದಾಗಿ ದೇಶಾದ್ಯಂತ 1.04 ಲಕ್ಷ ಶಾಲೆಗಳು ಏಕ-ಶಿಕ್ಷಕ ವ್ಯವಸ್ಥೆಯಡಿ ನಡೆಯುತ್ತಿವೆ.
ಶಿಕ್ಷಣ ಸಚಿವಾಲಯದ ದತ್ತಾಂಶದ ಪ್ರಕಾರ, ಪ್ರಾಥಮಿಕ ಹಂತದಲ್ಲಿಯೇ 2.97 ಲಕ್ಷ ಹುದ್ದೆಗಳೂ ಸೇರಿದಂತೆ ಒಟ್ಟು 3.57 ಲಕ್ಷ ಬೋಧನಾ ಹುದ್ದೆಗಳು ಖಾಲಿ ಇವೆ.
ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಹತ್ತು ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1.93 ಲಕ್ಷ ಹುದ್ದೆಗಳು ಖಾಲಿ ಇವೆ.