
ಒಡಿಶಾದಲ್ಲಿ ಎರಡು ಪ್ರತ್ಯೇಕ ತಲೆ ಹಾಗೂ ಒಂದೇ ಮುಂಡದೊಂದಿಗೆ ಜನಿಸಿದ್ದ ಅಪರೂಪದ ಸಯಾಮಿ ಅವಳಿ ಶಿಶುಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.
ಕಂಧಮಾಲ್ ಜಿಲ್ಲೆಯ ದಂಪತಿಗೆ ಅಕ್ಟೋಬರ್ 11ರಂದು ಜನಿಸಿದ್ದ ಈ ಶಿಶುಗಳಿಗೆ 'ಡೈಸೆಫಾಲಿಕ್ ಪ್ಯಾರಾಪೇಗಸ್' ಸ್ಥಿತಿಯಿದ್ದು, ಒಂದೇ ಹೃದಯ ಮತ್ತು ಯಕೃತ್ತು ಹೊಂದಿದ್ದವು.
ಹುಟ್ಟಿದ ಮರುದಿನವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ವಿಶೇಷ ನವಜಾತ ಶಿಶು ಆರೈಕೆ ಘಟಕದ ಲೈಫ್ ಸಪೋರ್ಟ್‌ನಲ್ಲಿದ್ದ ಶಿಶು ಶನಿವಾರ ಕೊನೆಯುಸಿರೆಳೆಯಿತು.