
ಅಕ್ಟೋಬರ್ 1ರಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ ಸೇರಿದಂತೆ ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ದರವು ಶೇಕಡಾ 4ರಿಂದ 8ರವರೆಗೆ ಏರಿಕೆಯಾಗಲಿದೆ.
ವಾಷಿಂಗ್ ಮೆಷಿನ್, ಫ್ರಿಡ್ಜ್ ಹಾಗೂ ಎಲ್ಇಡಿ ಟಿವಿ ಮೇಲೆ ಶೇಕಡಾ 4ರಷ್ಟು ಮತ್ತು ಎಸಿ ಮೇಲೆ ಶೇಕಡಾ 8ರಷ್ಟು ಬೆಲೆ ಹೆಚ್ಚಳವಾಗಲಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ, ಕಚ್ಚಾ ತೈಲದ ಅಭಾವ ಹಾಗೂ ತಾಮ್ರ, ಉಕ್ಕಿನ ದರ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ.