
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್ ಗಾನವಿ ಗೌಡ (ಘಾಟಿ ಗಾನವಿ) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
ಈ ಮೊದಲು 'ಹಳ್ಳಿ ಪವರ್' ರಿಯಾಲಿಟಿ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಗಾನವಿ, ತಮ್ಮ ನೇರ ಮಾತು ಹಾಗೂ ದಿಟ್ಟ ಆಟದ ಶೈಲಿಯಿಂದ ಆ ಹೆಸರು ಪಡೆದಿದ್ದರು.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕದನ ತೀವ್ರಗೊಂಡಿರುವಾಗ, ಇವರ ಎಂಟ್ರಿಯಿಂದ ಮನೆಯ ಗೇಮ್ ಪ್ಲಾನ್ ಸಂಪೂರ್ಣ ಬದಲಾಗುವ ಸಾಧ್ಯತೆಯಿದೆ.