
ಉದ್ಯಮಿಯೊಬ್ಬರು ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿ ತಮ್ಮನ್ನು ಭೇಟಿಯಾಗಿದ್ದು, ತಮ್ಮ ವಿರುದ್ಧ ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡುವ ಅಥವಾ ಬೇಹುಗಾರಿಕೆ ನಡೆಸುವ ಪ್ರಯತ್ನವಾಗಿರಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಆ ಉದ್ಯಮಿ ಆರಂಭದಲ್ಲಿ ಉದ್ಯಮದ ಕುರಿತು ಮಾತನಾಡಿ, ಬಳಿಕ ರಾಜಕೀಯ ಮತ್ತು ಬೂತ್ ಮಟ್ಟದಲ್ಲಿ ಯಾವ ತಂತ್ರಗಳನ್ನು ಮಾಡಬಹುದು ಎಂಬುದರ ಕುರಿತು ಚರ್ಚಿಸಲು ಶುರು ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ಸಚಿವರ ಮೇಲೆ ಸ್ಟಿಂಗ್ ಕಾರ್ಯಾಚರಣೆ ನಡೆಸಲು ಹುನ್ನಾರ ನಡೆಯುತ್ತಿರುವ ಬಗ್ಗೆ ತಮ್ಮ ಬಳಿ ದಾಖಲೆಗಳಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಜಾಗರೂಕರಾಗಿರಲು ಸಲಹೆ ನೀಡಿರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.