
ಆರ್ಬಿಐ ಕ್ಯಾಲೆಂಡರ್ ಪ್ರಕಾರ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಹಬ್ಬಗಳು ಮತ್ತು ವಾರಾಂತ್ಯ ಸೇರಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 15 ದಿನಗಳ ರಜೆ ಇರಲಿದೆ.
ಕರ್ನಾಟಕದಲ್ಲಿ ಆಗಸ್ಟ್ 2, 8, 9, 15, 16, 22, 23, 26 ಮತ್ತು 30ರಂದು ಒಟ್ಟು 9 ದಿನಗಳ ಕಾಲ ಬ್ಯಾಂಕುಗಳು ಬಂದ್ ಇರಲಿವೆ.
ರಜೆಯ ದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಮುಚ್ಚಿದ್ದರೂ, ಎಟಿಎಂ ಸೇವೆಗಳು, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಹಣ ವರ್ಗಾವಣೆ ಸೌಲಭ್ಯಗಳು ಎಂದಿನಂತೆ ಲಭ್ಯವಿರುತ್ತವೆ.