
ಕಳೆದ ತಿಂಗಳು ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಓಮನ್ ಮೂಲದ ಕೋ-ಪೈಲಟ್ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕೃತವಾಗಿ ಕೈಗೆತ್ತಿಕೊಂಡಿದೆ.
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಎಫ್ಜೆ1073 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಜೀವನ್ಮರಣದ ನಡುವೆ ಹೋರಾಡಿದ ಪೈಲಟ್ 174 ಪ್ರಯಾಣಿಕರ ಜೀವ ಕಾಪಾಡಿದ್ದರು.
ಈ ದಾಳಿಯು ವಿಮಾನವನ್ನು ಅಪಹರಿಸುವ ಅಥವಾ ಪತನಗೊಳಿಸುವ ಸ್ಪಷ್ಟ ಯತ್ನವಾಗಿತ್ತು ಎಂದು ತಿಳಿಸಿರುವ ಅಧಿಕಾರಿಗಳು, 2016ರ ಅಕ್ಟೋಬರ್ 9ರಂದು ವಿಮಾನ ಅಪಹರಣ ತಡೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.