
ಇಂಗ್ಲೆಂಡ್‌ನ ಟೆಲ್‌ಫೋರ್ಡ್ ನಗರದಲ್ಲಿ ಸಿಖ್ ಸಮುದಾಯದ ಬಸ್ ಚಾಲಕನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ ಗಡ್ಡ ಎಳೆದು, ಬಸ್ ಅನ್ನು ಅಪಹರಿಸಿ ರಾಂಗ್ ಸೈಡ್‌ನಲ್ಲಿ ಹಲವು ಕಾರುಗಳಿಗೆ ಢಿಕ್ಕಿ ಹೊಡೆಸಿದ್ದಾನೆ.
ಮಾಲಿನ್ಸ್‌ಗೇಟ್ ಪೊಲೀಸ್ ಠಾಣೆಯ ಸಶಸ್ತ್ರ ಪೊಲೀಸರು ತಕ್ಷಣ ಧಾವಿಸಿ ಬಸ್ ತಡೆದು, ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಹಾಗೂ ದರೋಡೆ ಆರೋಪದಡಿಯಲ್ಲಿ 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ಸಿಖ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಮತ್ತು ಬ್ರಿಟನ್‌ನಲ್ಲಿರುವ ಭಾರತೀಯ ಹಾಗೂ ಸಿಖ್ ಸಮುದಾಯದ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.