
ವಿಮಾನದಲ್ಲಿದ್ದ 174 ಪ್ರಯಾಣಿಕರ ಪ್ರಾಣ ಉಳಿಸಿ ಭೀಕರ ದುರಂತ ತಡೆದ ಪೈಲಟ್ ಸ್ಮಿತ್ ಮಚ್ಛಾರ್ ಅವರ ಶೌರ್ಯವನ್ನು ಪರಿಗಣಿಸಿ ಗುಜರಾತ್ ಸರ್ಕಾರ ಗೌರವ ಪ್ರಶಸ್ತಿ ಘೋಷಿಸಿದೆ.
ಪೈಲಟ್ ಸ್ಮಿತ್ ಮಚ್ಛಾರ್ ಅವರು ಅಪಾಯಕಾರಿ ಸನ್ನಿವೇಶದಲ್ಲೂ ತೋರಿದ ಧೈರ್ಯಕ್ಕಾಗಿ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಗುಜರಾತ್‌ನವರಾದ ಸ್ಮಿತ್ ಮಚ್ಛಾರ್ ಕಳೆದ 13 ವರ್ಷಗಳಿಂದ ವಾಣಿಜ್ಯ ವಿಮಾನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಫ್ಲೈದುಬೈ ಸಂಸ್ಥೆಯಲ್ಲಿದ್ದಾರೆ.