
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ ಇಎಂಐ ಕಂತು ಪಾವತಿ ವಿಚಾರದ ಜಗಳದಿಂದಾಗಿ ತಂದೆ, ತಾಯಿ ಮತ್ತು ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ.
18 ವರ್ಷದ ಕುನಾಲ್ ದುಬಾರಿ ಐಫೋನ್ ಖರೀದಿಸಿ ಇಎಂಐ ಕಟ್ಟಲು ಹಣವಿಲ್ಲದೆ ತಂದೆ ಮುರಳೀಧರ್ ಜೊತೆ ವಾಗ್ವಾದ ನಡೆಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ.
ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.