
ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಆಡುವ ಬಳಗದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ತಂಡ ತೊರೆದಿದ್ದ ಕರುಣ್ ನಾಯರ್, ಕ್ಲಬ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಡಾ. ಕೆ. ತಿಮ್ಮಪ್ಪಯ್ಯ ಮೆಮೋರಿಯಲ್ ಟೂರ್ನಮೆಂಟ್‌ನಲ್ಲಿ ಕರುಣ್ ನಾಯರ್ 183 ಎಸೆತಗಳಲ್ಲಿ 104 ರನ್ ಗಳಿಸಿ ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ.
ಸೌತ್ ಝೋನ್ ಕೋಚ್ ವಿಕ್ರಮ್ ವರ್ಮಾ ಕರುಣ್ ನಾಯರ್ ವೈಯಕ್ತಿಕ ಕಾರಣದಿಂದ ತಂಡ ತೊರೆದಿದ್ದಾರೆ ಎಂದು ಹೇಳಿದ್ದರೂ, ನಾಯರ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದೆ.