
ಬಿಗ್ ಬಾಸ್ ಕನ್ನಡ ಸೀಸನ್ 13 ಆಗಸ್ಟ್ 16ರಂದು ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು, ಈ ಬಾರಿ ಸಾಮಾನ್ಯ ಜನರಿಗೂ ದೊಡ್ಮನೆಗೆ ಪ್ರವೇಶ ಸಿಗಲಿದೆ.
ಆಡಿಷನ್ ನೀಡಿದ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ನಡೆಸಲಾಗುತ್ತಿದ್ದು, ಯಶಸ್ವಿಯಾದವರು ಮಾತ್ರ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.
ಕಾರ್ಯಕ್ರಮವು ಆಗಸ್ಟ್ 16ರ ನಂತರ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.