
ಮಧ್ಯಪ್ರಾಚ್ಯದ ಅಸ್ಥಿರತೆ ಮತ್ತು ತೈಲ ಬೆಲೆ ಏರಿಕೆಯಿಂದಾಗಿ 2026ರಲ್ಲಿ ಜಾಗತಿಕ ಆರ್ಥಿಕ ಪ್ರಗತಿಯ ವೇಗವು ಮಂದಗತಿ ಕಾಣಲಿದ್ದು, ಜಾಗತಿಕ ಜಿಡಿಪಿ ಶೇ. 2.6ರಷ್ಟು ಮಾತ್ರ ಬೆಳವಣಿಗೆ ಹೊಂದಲಿದೆ ಎಂದು ಯುಎನ್ಸಿಟಿಎಡಿ ಅಂದಾಜಿಸಿದೆ.
ಜಾಗತಿಕವಾಗಿ ಮಂದಗತಿ ಕಂಡುಬಂದರೂ ಏಷ್ಯಾ ಖಂಡವು ಜಾಗತಿಕ ಆರ್ಥಿಕ ಬೆಳವಣಿಗೆಗೆ ಶೇ. 59ರಷ್ಟು ಪ್ರಮುಖ ಕೊಡುಗೆ ನೀಡಲಿದೆ ಎಂದು ವರದಿ ತಿಳಿಸಿದೆ.
ಪ್ರಮುಖ ದೇಶಗಳ ಪೈಕಿ ಭಾರತವು ಶೇ. 7.3ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಜಾಗತಿಕ ಮಟ್ಟದಲ್ಲೇ ಮುಂಚೂಣಿಯಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ.