
ಬಿಗ್ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಗ್ಗ ಮಮ್ಮಿ ಅವರು ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಚೌಕಾಕಾರದ ಬಲೆಯನ್ನು ತಳ್ಳುತ್ತಾ ರಿಂಗುಗಳನ್ನು ಆಯ್ದುಕೊಂಡು ಗೂಟಕ್ಕೆ ಗುರಿ ಎಸೆಯುವ ಅಂತಿಮ ಹಂತದ ಟಾಸ್ಕ್ನಲ್ಲಿ ಜಗ್ಗ ಮಮ್ಮಿ ಜಯ ಸಾಧಿಸಿದರು.
ಇಡೀ ವಾರ ಉತ್ತಮ ಪ್ರದರ್ಶನ ನೀಡಿದ ಪ್ರಶಾಂತ್ ಅವರಿಗೆ 'ಉತ್ತಮ' ಗೌರವ ಸಿಕ್ಕರೆ, ಹೆಚ್ಚು ವೋಟ್ ಪಡೆದ ಶಾಸ್ತ್ರಿ ಮತ್ತೊಮ್ಮೆ 'ಕಳಪೆ' ಎನಿಸಿಕೊಂಡು ಜೈಲು ಸೇರಿದ್ದಾರೆ.