
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶ-ವಿದೇಶಿ ಪ್ರಯಾಣಿಕರಿಗಾಗಿ ಮೈಸೂರು ದಸರಾ ಸಂಸ್ಕೃತಿಯನ್ನು ಪರಿಚಯಿಸುವ 'ದಸರಾ ಸಂಭ್ರಮ' ಆಯೋಜಿಸಲಾಗಿದೆ.
ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಟರ್ಮಿನಲ್ಗಳಲ್ಲಿ ಪಟ್ಟದ ಗೊಂಬೆಗಳು ಹಾಗೂ ಜಂಬೂಸವಾರಿಯ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಏರ್ಪಡಿಸಿದ್ದ ಡೊಳ್ಳು ಕುಣಿತದ ಪ್ರದರ್ಶನದ ವೇಳೆ ಹಂಸಲೇಖ ಹಾಗೂ ವಿದೇಶಿ ಪ್ರಯಾಣಿಕರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.