
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ಡಿಸಿಇಟಿ ಅಡಿಯಲ್ಲಿ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ಗೆ ನೇರ ಪ್ರವೇಶದ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಆಗಸ್ಟ್ 22ರಂದು ಪ್ರಕಟಿಸಿದೆ.
ಸೀಟು ಪಡೆದ ಅಭ್ಯರ್ಥಿಗಳು ಆಗಸ್ಟ್ 24 ರಿಂದ 25ರವರೆಗೆ ನಿಗದಿತ ಶುಲ್ಕ ಪಾವತಿಸಿ, ಆಗಸ್ಟ್ 26ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ https://keaonline.karnataka.gov.in ಮೂಲಕ ಫಲಿತಾಂಶ ಪರಿಶೀಲಿಸಿ, ಅಡ್ಮಿಷನ್ ಆರ್ಡರ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.