
ಕೊಚ್ಚಿಯಿಂದ ಅಬುಧಾಬಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 ವಿಮಾನದ ಎಂಜಿನ್-1ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ವಾಪಸ್ ತರಲಾಗಿದೆ.
ವಿಮಾನವು 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಎಂಜಿನ್ ಆಯಿಲ್ ಪ್ರೆಶರ್ ಡೆಂಜರ್ ಜೋನ್ ತಲುಪಿದ್ದನ್ನು ಗಮನಿಸಿದ ಪೈಲಟ್‌ಗಳು, ಮುನ್ನೆಚ್ಚರಿಕೆಯಾಗಿ ಎಂಜಿನ್ ಆಫ್ ಮಾಡಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದು, ತಾಂತ್ರಿಕ ತಂಡವು ಎಂಜಿನ್‌ನಲ್ಲಿ ಉಂಟಾದ ಎಣ್ಣೆ ಸೋರಿಕೆಯ ಕಾರಣದ ಬಗ್ಗೆ ತನಿಖೆ ಆರಂಭಿಸಿದೆ.