Indian Politics
ಬಿಜೆಪಿ ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿದೆ: ಸಚಿವ ತಂಗಡಗಿ ಆರೋಪ

ಬಿಜೆಪಿ ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿದೆ: ಸಚಿವ ತಂಗಡಗಿ ಆರೋಪ

oneindia1h
THE BRIEF
1

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಇವಿಎಂ ದುರ್ಬಳಕೆ ಮೂಲಕ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಕೊಪ್ಪಳದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

2

ಕ್ಷೇತ್ರದ ರಾಜಕೀಯ ಪರಿಸ್ಥಿತಿ ಮತ್ತು ಅಲೆಗೆ ತಕ್ಕಂತೆ ಬಿಜೆಪಿ ಇವಿಎಂ ದುರ್ಬಳಕೆಯ ಆಟ ಆಡುತ್ತಿದೆ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಸ್ಪಷ್ಟ ಅಲೆ ಇದ್ದುದರಿಂದ ಅವರ ಆಟ ನಡೆಯಲಿಲ್ಲ ಎಂದರು.

3

ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇಂಡಿಯಾ ಕೂಟದ ನಾಯಕರನ್ನು ತಡೆದು ದೈಹಿಕವಾಗಿ ಹಿಂಸಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.