
ಅಮೆರಿಕ ನಿರ್ಬಂಧಗಳನ್ನು ಸಡಿಲಿಸಿ ತನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಕೇವಲ ಒಂದು ವಾರದಲ್ಲಿ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯಲು ಇರಾನ್ ಸಿದ್ಧತೆ ತೋರಿಸಿದ್ದು, ಈ ಪ್ರಸ್ತಾವನೆಯನ್ನು ಕತಾರ್ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್‌ಗೆ ತಲುಪಿಸಲಾಗಿದೆ.
ಒಪ್ಪಿಗೆಯಾದ 6ನೇ ದಿನದಂದು ಸಾಮಾನ್ಯ ವಾಣಿಜ್ಯ ನೌಕಾ ಸಂಚಾರ ಪುನರಾರಂಭಗೊಳ್ಳಲಿದ್ದು, 7ನೇ ದಿನ ಅಮೆರಿಕ-ಇರಾನ್ ನಡುವೆ ನೇರ ರಾಜತಾಂತ್ರಿಕ ಮಾತುಕತೆ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.
ಜಲಸಂಧಿಯ ತಡೆಗೋಡೆಗಳನ್ನು ಹಿಂಪಡೆಯುವುದು, ತೈಲ ಮಾರಾಟ ನಿರ್ಬಂಧ ಸಡಿಲಿಕೆ ಹಾಗೂ ಲೆಬನಾನ್-ಗಾಜಾದಲ್ಲಿ ಕದನ ವಿರಾಮ ಜಾರಿಗೆ ಇರಾನ್ ಆಗ್ರಹಿಸಿದೆ.