
ಕೆಎಸ್‌ಆರ್‌ಟಿಸಿ ಬೆಂಗಳೂರು ಸೇರಿದಂತೆ 6 ಜಿಲ್ಲೆಗಳಿಂದ ಜೋಗ ಜಲಪಾತಕ್ಕೆ ವಾರಾಂತ್ಯದ ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಆಗಸ್ಟ್ ತಿಂಗಳಿನಿಂದ ಆರಂಭಿಸಿದೆ.
ಬೆಂಗಳೂರಿನಿಂದ ನಾನ್ ಎಸಿ ಸ್ಲೀಪರ್ ಬಸ್ ದರ 3,300 ರೂ. ಇದ್ದರೆ, ದಾವಣಗೆರೆ, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗದಿಂದ 450 ರೂ.ನಿಂದ 1,000 ರೂ.ವರೆಗಿನ ದರ ನಿಗದಿಪಡಿಸಲಾಗಿದೆ.
ಪ್ರವಾಸಿಗರು ಮುಂಗಡ ಟಿಕೆಟ್ ಕಾಯ್ದಿರಿಸಲು www.ksrtc.in ವೆಬ್‌ಸೈಟ್ ಅಥವಾ 080-26252625 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.