
ಇರಾನ್‌ಗೆ ಯಾವುದೇ ರೀತಿಯ ಆರ್ಥಿಕ ಅಥವಾ ಸರಕು ಸಾಗಣೆಯ ನೆರವು ನೀಡುವ ರಾಷ್ಟ್ರಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲಿನ ಮಿಲಿಟರಿ ಮತ್ತು ಆರ್ಥಿಕ ನಿರ್ಬಂಧಗಳು ಯಶಸ್ವಿಯಾಗಿವೆ ಎಂದು ಪ್ರತಿಪಾದಿಸಿರುವ ಟ್ರಂಪ್, ಅಕ್ರಮ ತೈಲ ಸಾಗಣೆ ಮತ್ತು ಹಣ ವರ್ಗಾವಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಜಗತ್ತಿನ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಅಮೆರಿಕದ ಕಠಿಣ ದಿಗ್ಬಂಧನಗಳ ನಡುವೆಯೂ ಇರಾನ್ ಮಣಿಯಲು ನಿರಾಕರಿಸಿದ್ದು, 2028ರವರೆಗೆ ದೀರ್ಘಾವಧಿಯ ಆರ್ಥಿಕ ಹಾಗೂ ಸೇನಾ ಸಂಘರ್ಷವನ್ನು ಎದುರಿಸಲು ಸಿದ್ಧವಿರುವುದಾಗಿ ಘೋಷಿಸಿದೆ.