
ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ ತಂಗಡಗಿ, ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗಂಗಾವತಿಯಲ್ಲಿ ತನ್ನ ವಿರುದ್ಧ ಉಪಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದಾರೆ.
ತಾನು ರಾಜೀನಾಮೆ ನೀಡಿದ 24 ಗಂಟೆಯೊಳಗೆ ತಂಗಡಗಿ ಕೂಡ ರಾಜೀನಾಮೆ ನೀಡಬೇಕು ಎಂದು ರೆಡ್ಡಿ ಅವರಿಗೆ ಸವಾಲು ಹಾಕಿದ್ದು, ಜನಾದೇಶ ಲೂಟಿಕೋರನಿಗೋ ಅಥವಾ ಜನಸೇವಕನಿಗೋ ಎಂಬುದು ಸಾಬೀತಾಗಲಿ ಎಂದಿದ್ದಾರೆ.
ಗಣಿ ಲೂಟಿಯ ಅಕ್ರಮ ಸಂಪತ್ತಿನಿಂದ ಬಂದ ಅಹಂಕಾರದಿಂದ ರೆಡ್ಡಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ತಂಗಡಗಿ, ಕಳೆದ ರಾಜ್ಯಸಭಾ ಚುನಾವಣೆಯ ಕಾಲ್ ಲಿಸ್ಟ್ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.